ಹುಸಿ ಸಂತಸ Poem by Vidya Pandarinath

ಹುಸಿ ಸಂತಸ

ಚಿಲಿಪಿಲಿ ನಿನಾದದ ಸಂಗೀತ ಮೊಳಗಿಸುವ ಮುಂಜಾವಿನ
ರಾಗದಲಿ ದನಿಗೂಡಿಸಿ ಸಂಗೀತದ ಸವಿಜೇನ ಸವಿಯಲೇ,
ಇಲ್ಲ, ಹಳಸಿದ ಯೇೂಚನೆಗಳ ಕಿರಿಕಿರಯ ಅಡ್ಡ -ಹರಿವಿನ,
ಚುಚ್ಚಿ ಬೆಚ್ಚಿಬೀಳಿಸುವ ತಾರತಮ್ಯ ಗಳ ನಡುವೆ ಸರಿಯಲೇ?
ಸಂಚು-ಕಾಂಚಾಣಗಳ, ಏರು ಪೇರುಗಳ ಮಣಭಾರದ ಕಂತು
ಸುದ್ದಿ ಸಗಟುಗಳನು ತೂಗಿ ಭಾಗಿಸಿ, ಮೆಚ್ಚಿ ತಲೆ ತೂಗಲೇ
ಹುಸಿ ಮೆರಗಿನಲಿ.. ಈ ಪರಿಯಾಗಿ, ಪರಿಪರಿಯಾಗಿ.. ಇಂತು?
ಯಾರೂ ಕಾಣದ ಎಲ್ಲಿಯೂ ಇಲ್ಲದ ಕಲ್ಪನೆಯ ಸವಿ ಸಂತಸ
ಸಿಗುವುದೇ ಹೋನ್ನು- ಹಣದ ಸುರಿಮಳೆಯ ಈ.ಕ್ಷೇತ್ರದಲ್ಲಿ?
ಭಾರೀ ಚೀಲಗಳ ತುಂಬಿ, ತುಂಬುತ ಆದರೂ ಅತಿ ಆಯಾಸ,
ಡಬ ಡಬಿಸುತಿರುವ ಆ ಎರವಲು ಹ್ರುದಯ ಕೊಟ್ಟ ಪಾತ್ರದಲ್ಲಿ
ಬಟ್ಟಬಯಲಿನ, ರಣ ಬಿಸಿನಲಿ, ನಡಿಗೆಯಲಿ ಹಾಗೂ ಹೀಗೂ
ಹೇಗೋ ಹುಸಿ ಸಂತಸವ ಹೊತ್ತುಸುಮ್ಮುನೇಮುುಂದೆಸಾಗಲೇ
ಇಲ್ಲ, ಘಳಿಗೆಯ ನಿಜ ಅರಿವಿನ ಸಂಪತ್ತೆಂದು ತಿಳಿದು ಬಾಗಲೇ?

Saturday, February 28, 2026
Topic(s) of this poem: happiness
COMMENTS OF THE POEM
READ THIS POEM IN OTHER LANGUAGES
Close
Error Success