ವೇದಗಳ ಸಾರ ತಿಳಿದುಕೊಂಡರೇನು ಬಂತು,
ವೇದನೆಗಳ ಭಾರ ಅರ್ಥೈಸಿಕೊಂಡರೆ ಒಳಿತು..
ವೇದಗಳು ಪುಸ್ತಕದ ಬದನೆಕಾಯಿ,
ವೇದನೆಗಳು ಜೀವನದ ನುಗ್ಗೆಕಾಯಿ..
ವೇದಗಳ ಉಚ್ಚಾರ, ಆಚಾರ ಮತ್ತು ವ್ಯವಹಾರ ಮೇಲ್ಪಂಕ್ತಿ ಜಾತಿಯವರಿಂದ, ಮತ್ತು ಅವರ ಅನುಕೂಲಕ್ಕಾಗಿ,
ಆದರೆ,
ವೇದನೆಗಳ ಅನುಭವ, ಯಾತನೆ ಮತ್ತು ರೋಧನೆಗಳು ಯಾರನ್ನೂ ಬಿಟ್ಟಿದ್ದಲ್ಲ..
ವೇದಗಳು ನಾಲ್ಕು, ದಿಕ್ಕುಗಳೂ ನಾಲ್ಕು,
ಆದರೆ,
ವೇದನೆಗಳು ಸಾಕು-ಸಾಕು..
ನಮಿಸಿರಿ ಆ ಗುರುವನ್ನು,
ತೊರೆಯಿರಿ ಆ ಗರ್ವವನ್ನು,
ಅರ್ಪಿಸಿರಿ ನಿಮ್ಮನ್ನು ಆ 'ಶ್ರೀಕೃಷ್ಣನಲ್ಲಿ'..
*ಕೃಷ್ಣಾರ್ಪಣಮಸ್ತು*
- ಡಾ.ದೀಪಕ ವಿಶ್ವನಾಥ
This poem has not been translated into any other language yet.
I would like to translate this poem