ಅಧಿಕಾರದ ದಾಹ,
ವ್ಯಭಿಚಾರದ ಮೋಹ,
ಜೀವನವೇ ತ್ರಾಹಿ ತ್ರಾಹಿ..
ಧೂರ್ತರ ವ್ಯೂಹ,
ಹಿತಶತ್ರುಗಳ ದ್ರೋಹ,
ಜೀವನವೇ ತ್ರಾಹಿ ತ್ರಾಹಿ..
ದೇವರ ಮಾಯೆ,
ಶನೈಶ್ಚರನ ಛಾಯೆ,
ಜೀವನವೇ ತ್ರಾಹಿ ತ್ರಾಹಿ..
ಮೇಲಧಿಕಾರಿಗಳ ಮಿತಿ-ಮೀರಿದ ಕಿರುಕುಳ,
ದಿನನಿತ್ಯ ಏರುತ್ತಿರುವ ಅಗತ್ಯ ವಸ್ತುಗಳಿಂದ ಅನುಭವಿಸೋ ಕಳವಳ,
ಜೀವನವೇ ತ್ರಾಹಿ ತ್ರಾಹಿ..
ಸಮಯಕ್ಕೆ ಬಾರದ ಸಂಬಳ,
ಆದರೂ ಅನ್ಯರು ಅಪೇಕ್ಷಿಸುವರು ಗಿಂಬಳ,
ಜೀವನವೇ ತ್ರಾಹಿ ತ್ರಾಹಿ..
ಮಳೆಗಾಲದಲ್ಲಿ ನಿಲ್ಲದ ಮಳೆಯ ಕಿರುಕುಳ,
ಬಯಲುಸೀಮೆಯಲ್ಲಿ ಬಿಸಿಲಿನ ಉಪಟಳ,
ಜೀವನವೇ ತ್ರಾಹಿ ತ್ರಾಹಿ..
ಬೇಡುವೆನು ಆ ಗಣಪನಲ್ಲಿ,
ಆರ್ಪಿಸುವೆನು ಭಕ್ತಿಯಿಂದ ದೂರ್ವವನು,
ನಮಿಸುವೆನು ಆ ಸೂರ್ಯನಲ್ಲಿ,
ಉದಾಯವಾಗಲಿ ದಿನದ ಶುಭ ಚಟುವಟಿಕೆ ಪೂರ್ವದಲ್ಲಿ..
ದೇವರ ಕರುಣೆಯಿದ್ದಲ್ಲಿ ಇನ್ನೆಲ್ಲಿಯ ತ್ರಾಹಿ ತ್ರಾಹಿ?
ದೇವರೇ ನಮ್ಮ ಪಾಲಿಗೆ ಪಾಹಿ ಪಾಹಿ,
ಭಕ್ತಿಯಿಂದ ನಮಿಸಿ ನಮಾಮಿ ನಮಾಮಿ,
ನಿಲ್ಲುತ್ತದೆ ಜೀವನದ ಕರಾಳ ನವಮಿ..
*ಶ್ರೀಕೃಷ್ಣಾರ್ಪಣಮಸ್ತು*
- ಡಾ.ದೀಪಕ ವಿಶ್ವನಾಥ
This poem has not been translated into any other language yet.
I would like to translate this poem