ಜೀವನದ ನಿತ್ಯ-ನಿರಂತರದ ಸೆಣಸು,
ಖಾರವಾಯ್ತು ಅಡುಗೆಯಲ್ಲಿ ಮೆಣಸು,
ತಿನ್ನೋಣವೇ ಸ್ವಲ್ಪ ಸಪ್ಪೆಯ ಗೆಣಸು?
ಮನಸ್ಸಿಗೂ ಮುದ ನೀಡಲಿದೆ ಗಂಜಿ-ಒಣಸು..
ನಿತ್ಯ ನಿಲ್ಲದ ಸೆಣಸು,
ಜೀವನವೇ ಬಾಡಿ ಹೋದ ಕನಸು,
ಬೇಕಿದೆ ಯುದ್ಧ ಗೆಲ್ಲಲು ಅರ್ಜುನನ ಧನುಸ್ಸು,
ಅದನ್ನ ಸಿದ್ಧಿಸಲ್ಲು ಮಾಡಬೇಕಿದೆ ದೀರ್ಘ ತಪಸ್ಸು..
ಇಳಿಯ ವಯಸ್ಸಿನಲ್ಲಿ ಇರೋ ಹುಮ್ಮಸ್ಸು,
ಸರಿಯಾದ ದಾರಿಗೆ ಕೇಂದ್ರೀಕರಿಸಲು ಬೇಕು ವರ್ಚಸ್ಸು,
ಗುರುವಿನ ಆಶೀರ್ವಾದವಿದ್ದಲ್ಲಿ ಜೀವನವೇ ಯಶಸ್ಸು,
ಬಿಡಬೇಕು ನಮ್ಮಅನ್ಯರ ಮೇಲಿನ ಬೇಡದ ಮುನಿಸು..
ಬಡವನಿಗೆ,
ನಿತ್ಯ ಊಟ ಸಪ್ಪೆ-ಗೆಣಸು, ಗಂಜಿ-ಒಣಸು,
ನಿತ್ಯ ಹೋರಾಟದ ಸೆಣಸು..
ಜೀವನದ ಪಾಠವಿಷ್ಟೇ,
ಸೋತಾಗ ತಲೆತಗ್ಗಿಸು, ಗೆದ್ದಾಗ ಮೈಬಗ್ಗಿಸು,
ಅರಿವಾದಾಗ ತಪ್ಪು ಒಪ್ಪಿಕೊ, ಮರೆಯಾಗುವ ಮುನ್ನ ತಿದ್ದಿಕೋ..
*ಶ್ರೀಕೃಷ್ಣಾರ್ಪಣಮಸ್ತು*
- ಡಾ.ದೀಪಕ ವಿಶ್ವನಾಥ
- ೭/೪/೨೦೨೩
This poem has not been translated into any other language yet.
I would like to translate this poem