ಧರ್ಮದ ದಂಟು,
ಜಾತಿಯ ಕಗ್ಗಂಟು..
ಭಾಷೆಯ ನಿಘಂಟು, ,
ಪಲಯನವಾದಿಗಳ ನಂಟು..
ಏರುತ್ತಿರುವ ವಿದ್ಯುತ್-ಕರೆಂಟು,
ತೀರಿಸಲಾಗದ ಮನೆ-ರೆಂಟು..
ನಿಧಾನವಾಗಿ ಬರೋ ಪೇಮೆಂಟು,
ಬರಿದಾಗುತ್ತಿರೋ ಗಂಟು..
ಸದಾ ಕಾಡೋ ಸಂಖ್ಯೆ ಎಂಟು,
ಕಾಪಾಡಲು ಎಲ್ಲಿದ್ದಾನೆ ರಾಮ-ಬಂಟು..
ಇನ್ನು ಸಾಕು ಕುಂಟು ನೆಪ,
ಮಾಡೋಣ ಸದಾ ಏಳುಕೊಂಡಲ ವಾಡನ ಜಪ,
ಭಕುತಿ ನಮ್ಮದು, ಶಕುತಿ ಅವನದ್ದು..
*ಶ್ರೀಕೃಷ್ಣಾರ್ಪಣಮಸ್ತು*
- ಡಾ.ದೀಪಕ ವಿಶ್ವನಾಥ
This poem has not been translated into any other language yet.
I would like to translate this poem