ಓ ಮಾರುತಿ, 
ಸುಮ್ಮನೆ ಏಕೆ ಕೂರುತಿ, 
ಯಾವಾಗ ನೀ ಹಾರುತಿ, 
ನಾ ಮಾಡುವೆ ನಿನಗೆ ಮಂಗಳಾರತಿ..
ಓ ಮಾರುತಿ, 
ನೀ ನನ್ನ ಕೋರಿಕೆಗಳನ್ನು ಎಂದು ಅಲಿಸುತಿ? 
ನನ್ನ ಆಸೆಗಳಿಗಿವೆ ಇತಿ, 
ತಡ ಮಾಡದಿರು ನೀ ಮಾರುತಿ..
ಓ ಮಾರುತಿ, 
ಆಗು ನೀ ನನ್ನ ಸಾರಥಿ, 
ಬರಲಿ ನನಗೂ ನನ್ನ ಸರಧಿ, 
ನನ್ನ ಪ್ರಾರ್ಥನೆ ಸ್ವೀಕರಿಸಯ್ಯ ಓ ಮಾರುತಿ..
ಓ ಮಾರುತಿ, 
ನಾ ಕೇಳಲಿಲ್ಲ ನಿನಲ್ಲಿ ರತಿ/ಆರತಿ/ ಭಾರತಿ, 
ಸಾಕೊಬ್ಬಳು ನನಗೆ ನನ್ನ ಸತಿ, 
ಎಂದಿಗೆ ಸಿಗುವುದು ನಿನ್ನ ಮಂಜೂರಾತಿ? ? 
ಓ ಮಾರುತಿ, 
ತೋಲಗಿಸು ನನ್ನ ಭೀತಿ, 
ಕರುಣಿಸು ಸ್ವಲ್ಪ ಪ್ರೀತಿ, 
ಬದುಕಾಗುತ್ತಿದೆ ಬರೀ ಬ್ರಾಂತಿ, ಬೇಡದ ಕ್ರಾಂತಿ, ನಿಲ್ಲದ ಅಶಾಂತಿ..
ಓ ಮಾರುತಿ, 
ನೀನು ದೃಢಾಕಾರದ ಮೂರುತಿ, 
ಭಕ್ತರ ಪಾಲಿನ ಸಂಜೀವಿನಿ ಬುತ್ತಿ, 
ದಯಪಾಲಿಸಯ್ಯ ಈ ಬಡಪಾಯಿಯ ಮೇಲೆ ನಿನ್ನ ಕೃಪಾದೃಷ್ಟಿ..
ನಮಿಸುವೆನು ನಿನ್ನನ್ನು ಓ ಮಾರುತಿಯೇ, 
ಪೂಜಿಸುವೆನು ಪುರುಷೋತ್ತಮ ಶ್ರೀ ರಾಮಚಂದ್ರನನ್ನು, 
ಇನ್ನಾದರೂ ಅಲಿಸುವೆಯಾ ನನ್ನ ಮನದಾಳವನ್ನು, 
ಕಾಯುತ್ತಿರುವೆನು ಓ ಮಾರುತಿ..
*ಶ್ರೀಕೃಷ್ಣಾರ್ಪಣಮಸ್ತು*
ಡಾ.ದೀಪಕ ವಿಶ್ವನಾಥ                
This poem has not been translated into any other language yet.
I would like to translate this poem
 
                    